
ಮಹಿಳೆಯರೇ ಎಚ್ಚರ:
ಹೆಣ್ಣು ಮಕ್ಕಳಿಗೆ ಆಭರಣವೇ ಸಿಂಗಾರ, ಆದರೆ ಈಗ ಆಭರಣವೇ ಅವರ ಜೀವಕ್ಕೆ ಅಪಾಯವಾಗುತ್ತಿದೆ.
ಇತ್ತೀಚಿಗೆ ಎಲ್ಲೆಡೆಯೂ ಸರಗಳ್ಳತನ ಹೆಚ್ಚಾಗಿದ್ದು ಒಂಟಿ ಮನೆ ಹಾಗೂ ಒಂಟಿ ಮಹಿಳೆಯರೇ ಅವರ ಟಾರ್ಗೆಟ್ ಆಗಿದ್ದಾರೆ. ಈಗಿನ ನಿರಂತರ ಕೆಲಸದ ಸಮಯದಲ್ಲಿ ಹೆಣ್ಣುಮಕ್ಕಳು ತಮ್ಮ ಕೆಲಸದಲ್ಲಿ ಇರಬೇಕಾದರೆ ಸರಗಳ್ಳರು ಗಾಡಿಯಲ್ಲಿ ಬಂದು ಸರವನ್ನು ಕದಿಯುವ ಕೆಲಸವನ್ನು ಮಾಡುತ್ತಿದ್ದಾರೆ.ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ನಮ್ಮ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇನ್ಸ್ ಪೆಕ್ಟರ್ ಸಾಧಿಕ್ ಪಾಷರವರು ಮಹಿಳೆಯರಿಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದ್ದಾರೆ. ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನಕ್ಕಾಗಿ ಧರಿಸಬೇಡಿ ಅದು ಕಳ್ಳತನ ಮಾಡುವ ಮನಸ್ಥಿತಿ ಇರುವವರಿಗೆ ಆಕರ್ಷಣೆಯಾಗುತ್ತದೆ. ಅವರು ಅದನ್ನು ಕದಿಯುವ ಸಮಯದಲ್ಲಿ ನೀವು ಕೆಳಗಡೆ ಬಿದ್ದು ಸಣ್ಣ ಪುಟ್ಟ ಗಾಯಗಳು ಅಥವಾ ಪ್ರಾಣಪಾಯವಾಗಬಹುದು. ಆದ್ದರಿಂದ ಮಹಿಳೆಯರು ಹಬ್ಬ ಹರಿದಿನಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ದುಬಾರಿಯಾದ ಆಭರಣಗಳನ್ನು ಧರಿಸಬೇಡಿ ಹಾಗೂ ಮಹಿಳೆಯರು ಹೊರಗಡೆ ಓಡಾಡುವಾಗ ಅನುಮಾನಸ್ಪದ ವ್ಯಕ್ತಿ ಯಾರಾದರೂ ಕಂಡರೆ ತಕ್ಷಣ ಆತನ ಭಾವಚಿತ್ರ ಮತ್ತು ಆತ ಬಂದಿರುವ ಗಾಡಿಯ ಭಾವಚಿತ್ರವನ್ನು ಸೆರೆಹಿಡಿದು ಪೊಲೀಸ್ ಠಾಣೆಯ ನಂಬರ್ ಗೆ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಿ ಇಂದು ಇನ್ಸ್ ಪೆಕ್ಟರ್ ಸಾಧಿಕ್ ಪಾಷರವರು ತಿಳಿಸಿದ್ದಾರೆ.

ಎಚ್ಚರ..ಎಚ್ಚರ..! ಬೆಲೆ ಬಾಳುವ ಆಭರಣಗಳನ್ನು ಧರಿಸುವ ಮುನ್ನ ಒಮ್ಮೆ ಯೋಚಿಸಿ..
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು ಪ್ರಕರಣಗಳನ್ನು ಭೇದಿಸಿ ಕೆಲವರಿಂದ ಸರಗಳ್ಳರು ಕಸಿದುಕೊಂಡಿರುವ ಆಭರಣಗಳನ್ನ ಕಳೆದುಕೊಂಡಿರುವವರಿಗೆ ಹಿಂತಿರುಗಿಸಿದ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ರವರು ದೊಡ್ಡಬಳ್ಳಾಪುರ ಜನತೆಯ ಮೆಚ್ಚುಗೆಗೆ ಕಾರಣವಾಗಿದ್ದಾರೆ.
